Karnataka politics: Minister from Belagavi, Ramesh Jarkiholi may resign to his post today if Congress will not fulfill his demands, sources said. <br /> <br />ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರೂ, ಆ ಮಾತುಕತೆ ಫಲ ನೀಡಿದ ಲಕ್ಷಣ ಕಂಡುಬರುತ್ತಿಲ್ಲ! ಕಾಂಗ್ರೆಸ್ ನಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸಿಕ್ಕರೆಮಾತ್ರ ಇರುತ್ತೇನೆ ಎಂದು ತಮ್ಮ ಗುರುವಾದ ಸಿದ್ದರಾಮಯ್ಯ ಅವರಿಗೇ ಜಾರಕಿಹೊಳಿ ಷರತ್ತು ಹಾಕಿದ್ದಾರೆ ಎಂಬ ವದಂತಿಯೂ ಕೇಳಿಬರುತ್ತಿದೆ. <br />